ಹೈಲೆಟ್ಸ್:
ನನ್ನ ಮನೆಗೆ ಬಂದು ದುಡ್ಡು ಎಣಿಸೋ ತಾಕತ್ತು ಯಾವನಿಗೂ ಇಲ್ಲ
ಗೃಹ ಸಚಿವ ಆರಗ ಜ್ಞಾನೇಂದ್ರ ಗರಂ
ಹೆಚ್‌ಡಿಕೆ, ಕಿಮ್ಮನೆ ರತ್ನಾಕರ್ ವಿರುದ್ಧ ವಾಗ್ದಾಳಿ
ತೀರ್ಥಹಳ್ಳಿ:
ಚ್ಚಾರಿತ್ರ್ಯದ ಬದುಕು ನನ್ನದಾಗಿದ್ದು ನನ್ನ ಮನೆಗೆ ಬಂದು ದುಡ್ಡು ಎಣಿಸೋ ತಾಕತ್ತು ಯಾವನಿಗೂ ಇಲ್ಲ. ನೀವು ಮಾಡಿರೋ ಹೊಲಸನ್ನು ನಾನು ತೊಳೆದಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗರಂ ಆಗಿಯೇ ವಾಗ್ದಾಳಿ ನಡೆಸಿದ್ದಾರೆ. ಯಾರು ಏನ್ ಬೇಕಾದ್ರೂ ಹೇಳಬಹುದಾ ಎಂದು ಮಾಜಿ ಮುಖ್ಯಮಂತ್ರಿ, ಕ್ಷೇತ್ರದ ಮಾಜಿ ಸಚಿವ ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಸುಮ್ಮನಿರಲ್ಲ. ನಿಮ್ಮಗಳ ಹೂರಣ ಪೂರ್ಣ ಬಿಚ್ಚಿಡುತ್ತೇನೆ ಎಂದು ಕಿಡಿಕಾರಿದ್ದಾರೆ. ಚಾರಿತ್ರ್ಯ ವಧೆ, ಅವಹೇಳನ ಮಾಡುವ ಪ್ರಯತ್ನ ನಡೆಸಿದ್ದಾರೆ. ನನ್ನ ಬದುಕು ಶುದ್ಧವಾಗಿದ್ದು ಬಡತನದಲ್ಲಿ ಹುಟ್ಟಿದ ಕಾರಣಕ್ಕೆ ಚಾರಿತ್ರ್ಯವಧೆ ಮಾಡಿದರೆ ಜನರು ಸುಮ್ಮನಿರಲ್ಲ.
ನಾನು ಸಾಯೋತನಕ ಗುಮ್ಮಿ ಬಾವಿ ನೀರು ಕುಡಿದುಕೊಂಡೇ ಇರಬೇಕಾ ಎಂದು ಪ್ರಶ್ನಿಸಿದರು. ನಾಲಿಗೆ ಮೇಲೆ ಹಿಡಿತ ಇರಬೇಕು, ರಾಜಕೀಯವಾಗಿ ಮುಗಿಸಬೇಕು ಅಂತ ಮಾಡಿದ್ದಾರೆ. ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಏನೆಲ್ಲ ಹಗರಣ ನಡೆಸಿದ್ದೀರಾ ಎಂಬುದು ಜನರಿಗೆ ಗೊತ್ತಿದೆ. ನಿಮ್ಮ ಅವಧಿಯ ಹಗರಣ ಒಂದೊಂದೆ ಬಯಲಿಗೆ ಬರುತ್ತಿದೆ. ಏಕವಚನದಲ್ಲಿ ಮಾತನಾಡುವ ಮಾಜಿ ಸಚಿವರ ನಾಲಿಗೆಯ ಕುಲ, ಸಂಸ್ಕೃತಿಯನ್ನು ಹೇಳುತ್ತಿದೆ ಕ್ಷೇತ್ರದ ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ರು.